ಸರಳವಾಗಿ ಮದುವೆ ಮಾಡಿಕೊಂಡ ಹಳ್ಳಿಮೇಷ್ಟ್ರು ಚಿತ್ರದ ಕಪ್ಪೆರಾಯ! ಪತ್ನಿ ನಿಜಕ್ಕೂ ಯಾರು, ಜೋಡಿ ಹೇಗಿದೆ ನೋಡಿ

Spread the love

ಸರಳವಾಗಿ ಮದುವೆ ಮಾಡಿಕೊಂಡ ಹಳ್ಳಿಮೇಷ್ಟ್ರು ಚಿತ್ರದ ಕಪ್ಪೆರಾಯ! ಪತ್ನಿ ನಿಜಕ್ಕೂ ಯಾರು, ಜೋಡಿ ಹೇಗಿದೆ ನೋಡಿ

ಕನ್ನಡದ ಆಲ್ ಟೈಮ್ ಸೂಪರ್ ಯೆಶಸ್ವಿ ಸಿನಿಮಾಗಳಲ್ಲಿ ಒಂದು ಹಳ್ಳಿಮೇಷ್ಟ್ರು. ಈ ಸಿನಿಮಾ ಇವತ್ತು ಕೂಡ ಟಿವಿಯಲ್ಲಿ ಪ್ರಸಾರವಾದಾಗ ಜನ ಬಹಳ ಇಷ್ಟಪಟ್ಟು ಎಲ್ಲರೂ ನೋಡುತ್ತಾರೆ. ಹಳ್ಳಿಮೇಷ್ಟ್ರು ತಮಿಳು ಸಿನಿಮಾದ ರಿಮೇಕ್ ಆದರೂ ಸಹ, ರವಿಚಂದ್ರನ್ ಅವರು ಕನ್ನಡದ ನೇಟಿವಿಟಿಗೆ ತಕ್ಕಂತೆ ಸಿನಿಮಾವನ್ನು ತೆಗೆದರು. ಕಾಮಿಡಿ, ಪ್ರೀತಿ ಎರಡರ ಕಥೆ ಹೊಂದಿದ್ದ ಹಳ್ಳಿಮೇಷ್ಟ್ರು ಸಿನಿಮಾದ ಹಾಡುಗಳು ಸಹ ಬಹಳ ಫೇಮಸ್ ಆಗಿದ್ದವು. ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಮಕ್ಕಳ ದೊಡ್ಡ ಗ್ಯಾoಗ್ ಇದೆ. ಶಾಲೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮೇಷ್ಟ್ರು, ಅವರ ವಿದ್ಯಾರ್ಥಿಗಳು ಮತ್ತು ನಟಿ ವಿಂದ್ಯಾ ಅವರ ಸ್ನೇಹಿತರಾಗಿ ಕೆಲವು ಮಕ್ಕಳು ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ನಟಿಸಿದ್ದಾರೆ.

ಹಳ್ಳಿಮೇಷ್ಟ್ರು ಚಿತ್ರದ ಕಪ್ಪೆರಾಯ

ಈ ಸಿನಿಮಾದಲ್ಲಿ ನಟಿ ವಿಂದ್ಯಾ ಅವರ ಜೊತೆ ಓಡಾಡುವ ಮಕ್ಕಳ ಪಾತ್ರ ಸಿನಿಮಾದಲ್ಲಿ ಮುಖ್ಯಪಾತ್ರಗಳ ಹಾಗೆಯೇ ಇದ್ದವು. ನಾಯಕಿ ಮಾಡುವ ಎಲ್ಲಾ ಕೆಲಸಗಳಿಗೂ ಸಾಥ್ ನೀಡುವ ಪಾತ್ರಗಳಾಗಿದ್ದವು ಈ ಎಲ್ಲಾ ಮಕ್ಕಳ ಪಾತ್ರಗಳು. ಇವುಗಳಲ್ಲಿ ಮರೆಯಲಾಗದ ಪಾತ್ರ ಕಪ್ಪೆರಾಯ. “ನನ್ನ ಹೆಸರು ಕೆಂಪುರಾಯ ಸಾರ್, ನಾನು ಕಪ್ಪಗೆ ಇರೋದಕ್ಕೆ ಎಲ್ಲರೂ ನನ್ನ ಕಪ್ಪೆರಾಯ ಅಂತ ಕರೀತಾರೆ” ಎಂದು ಆ ಹುಡುಗ ಹೇಳುವ ಡೈಲಾಗ್ ಇಂದಿಗೂ ಜನರಲ್ಲಿ ನಗು ಮೂಡಿಸುವುದು ಖಂಡಿತ. ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಮನರಂಜನೆಯ ಪ್ರಮುಖ ಅಂಶವಾಗಿದ್ದ ಪಾತ್ರ ಕಪ್ಪೆರಾಯ. ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಹಲವು ಹಾಸ್ಯಭರಿತ ಸನ್ನಿವೇಶಗಳು ಈ ಕಪ್ಪೆರಾಯ ಪಾತ್ರದ ಮೇಲೆ ಚಿತ್ರಣವಾಗಿದೆ.

ಹಳ್ಳಿಮೇಷ್ಟ್ರು ಸಿನಿಮಾವನ್ನು ಈ ಕಾಮಿಡಿಗಾಗಿ ಹಲವು ಜನ ಈಗಲೂ ನೋಡುವುದುಂಟು. ದಶಕದ ಹಿಂದೆ ಕಪ್ಪೆರಾಯ ಪಾತ್ರ ಮಾಡಿದ ಆ ಹುಡುಗನ ನಿಜವಾದ ಹೆಸರು ಫಕೀರಪ್ಪ. ಆಗ ಹೇಗೆ ಕುಳ್ಳಗೆ ಇದ್ದರೋ ಈಗಲೂ ಹಾಗೆಯೇ ಇದ್ದಾರೆ ಫಕೀರಪ್ಪ. ಕಪ್ಪೆರಾಯ ಪಾತ್ರದಲ್ಲಿ ನಟಿಸಿದ್ದ ಫಕೀರಪ್ಪ ಅವರು ನಂತರದ ದಿನಗಳಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿಲ್ಲ. ಇತ್ತೀಚೆಗೆ ಫಕೀರಪ್ಪ ಅವರು ಕವಿತಾ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫಕೀರಪ್ಪ ಮತ್ತು ಕವಿತಾ ದಂಪತಿಯ ಫೋಟೋ ಇಲ್ಲಿದೆ ನೋಡಿ. ಈ ಜೋಡಿಯ ಮುಂದಿನ ಜೀವನ ಚೆನ್ನಾಗಿರಲಿ ಎಂದು ಹಾರೈಸಿ.

2017 ರಲ್ಲೇ ಫಕೀರಪ್ಪ ಅವರು ಗಡ್ದಪ್ಪ ಹಾಗು ಸೆಂಚುರಿ ಗೌಡ ಅವರ ಜೊತೆ ಚಿನ್ನದ ಗೊಂಬೆ ಎಂಬ ಸಿನಿಮಾದಲ್ಲಿ ಕೂಡ ನಟಿಸಿದ್ದರು. ಆ ಚಿತ್ರದ ಕೆಲವೊಂದು ಫೋಟೋಗಳನ್ನು ನೀವು ಇಲ್ಲಿ ನೋಡಬಹುದು. ಫಕೀರಪ್ಪ ಅವರು ಸದ್ಯ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದಾರೆ. ಫಕೀರಪ್ಪ (ಕಪ್ಪೆರಾಯ) ದಂಪತಿಗಳ ಸುಂದರ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು. ಹಳ್ಳಿ ಮೇಷ್ಟ್ರು ಸಿನಿಮಾದಿಂದ ಫಕೀರಪ್ಪ ಅವರ ಕಪ್ಪೆರಾಯ ಪಾತ್ರದಿಂದ ಇಡೀ ಕರ್ನಾಟಕಕ್ಕೆ ಇವರು ಮನೆ ಮಾತಾಗಿದ್ದರು. ಇವರು ಆದಷ್ಟು ಬೇಗ ಮತ್ತಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *